Monday, July 4, 2016

ಅಭೂತಪೂರ್ವ

  ಪ್ರಿಯ ಸ್ನೇಹಿತರೆ ಸಹಜವಾಗಿ ಎಲ್ಲರಿಗೂ ಕನಸು ಬೀಳುವುದು ಸರ್ವೇ ಸಾಮಾನ್ಯ. ಆ ಕನಸುಗಳು ನಮ್ಮ ಜೀವನದ ಘಟನೆಗಳ ಚಿತ್ರಿತವಾಗಿ ಬಂದಾಗ ಅದರ ಅನುಭವ ವಿಶೇಷವಾಗಿ ಆ ಕನಸುಗಳು ದೈವ ದೆವ್ವಗಳ ಮಿಶ್ರಣ ಕೂಡಿದಾಗ ಕಾಣುವ ಕನಸಿನ ರೋಚಕತೆ ಕಂಡವರಿಗೇ ಗೊತ್ತು.  ಆ ಕನಸುಗಳಲ್ಲಿ ಬರುವ ಗ್ರಾಪಿಕ್ಸ್ ನಮ್ಮ ಊಹೆಗೂ ಮೀರಿದ್ದು .ಆ ಕನಸುಗಳಲ್ಲಿ ಬರುವ ನಮ್ಮ ಕತೆ ಗೊತ್ತಿರುವ ಪಾತ್ರಗಳು, ಆ ಪಾತ್ರಗಳು ತಮ್ಮ ಅಭಿನಯದಲ್ಲಿ ತಲ್ಲೀನವಾದರೀತಿ ; ಅದನ್ನು ನೆನಪು ಮಾಡಿಕೊಂಡರೆ ಅದ್ಬುತ ಅನುಭವ ಹೌದು ತಾನೇ.!? ವಿಶೇಷವಾಗಿ ಆ ಕನಸಲ್ಲಿ ಒಂದು ಭಾವನಾತ್ಮಕವಾಗಿ ಸೆಳೆಯುವ ಕಣ್ಣೀರ ಕಥೆ ಇದ್ದರೆ ಊಹಿಸಿಕೊಳ್ಳಿ ಹೇಗಿರುತ್ತೆ . ಅನುಭವ. ಮೈ ಜುಮ್ಮೆನಿಸುತ್ತೆ ,ಎದೆ ಝಲ್ಲೆನಿಸುತ್ತೆ ಮನಸು ಭಾರ ಎನಿಸುತ್ತೆ. ಅಲ್ಲವೆ !!?  ಅದಾದ ನಂತರ ನಮಗೆ ನಿದ್ರೆ ಇಂದ ಎಚ್ಚೆತ್ತು ಆ ಕತೆ ಕಣ್ಣೆದುರಿಗೆ ಹರಿದಾಡಿ ಎಂಥಾ ಕನಸಿದು ಅಂತ ಅನಿಸಿ ಮತ್ತೆ ಆ ಕನಸು ಬಂದಿದ್ದರೆ ಚೆನ್ನಾಗಿತ್ತು.  ಅನಿಸುವುದು ಎಲ್ಲರಿಗೂ ಜೀವನದಲ್ಲಿ ಓಮ್ಮೆಯಾದರು ಅನಿಸದೆ ಇರದು; ಅನಿಸೇ ಅನಿಸಿರುತ್ತದೆ. ಆದರೆ ದುರಾದೃಷ್ಟವಶಾತ್ ನಮಗೆ ಆ ಕನಸು ಪುನಃ ನಮಗೆ ಬರುವುದೇ ಇಲ್ಲ. ಆದರೆ ಆ ಕನಸುಗಳು ಪುನಃ ಪುನಃ ನಮ್ಮ ಮುಂದೆ ಬರುವಂತಾದರೆ ಅದಕ್ಕಿಂತ ಖುಷಿ ಬೇರೊಂದಿಲ್ಲ. ಅಂತಹ ಖುಷಿಯನ್ನು ತಮಗೆ ನೀಡುವಲ್ಲಿ ನಮಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ನಮ್ಮ ಉದಯೋನ್ಮುಖ ನಿರ್ದೇಶನ ತಾರೆ ಸುಮಂತ್ ರವರು. ಹೌದು ಗೆಳೆಯರೆ ನಾನು ಈಗ ಹೇಳಲು ಹೊರಟಿರುವುದು ನಮ್ಮ ಹೊಚ್ಚ ಹೊಸ ಕನ್ನಡ ಸಿನಿಮಾ . ನಿನ್ನೆ ಬಿಡುಗಡೆಯಾಗಿ ಯಶಸ್ವಿಯಾಗಿ ಜನಭರಿತವಾಗಿ ಮುನ್ನುಗ್ಗುತ್ತಿರುವ "ನಾನಿ" ಸಿನಿಮಾ ದ ಕುರಿತು. ನೀವು ಕಂಡು ಕೇಳರಿಯದ ರಚನಾತ್ಮಕವಾದ ರಮಣೀಯವಾದ ಅದ್ಬುತವಾದ ಸಂಗೀತ ರಸಧಾರೆಯೊಂದಿಗೆ ನಮಗೆ ರಂಜನೆಯ ನೀಡುತ್ತಿರುವ ನೈಜ ಕಥೆಯಾಧಾರಿತ ಸಿನಿಮ. ನಾನು ಮೇಲೆ ಹೇಳಿದಂತೆ ಇದೊಂದು ಕನಸಿನ ಸಿನಿಮಾವೇ ಸರಿ . ಎದೆ ಝಲ್ಲೆನಿಸುತ್ತೆ ಮನಸಲಿ ದುಃಖ ತುಂಬಿ ಮುಖದಲ್ಲಿ ಕಣ್ಣೀರು ನಮಗರಿವಿಲ್ಲದೆ ಸುರಿಯುತ್ತೆ. ಸಂಗೀತ ನಮ್ಮ ಕಿವಿಗೆ ಹಾಗೂ ಕಣ್ಣಿಗೆ ಇಂಪು ಮತ್ತು ತಂಪನ್ನು ನೀಡುತ್ತದೆ.  ಓಟ್ಟಾರೆಯಾಗಿ ಹೇಳಬೇಕೆಂದರೆ ನಾವು ನಮ್ಮ ಕುಟುಂಬ ಸಮೇತ ಹೋಗಿ ನೋಡಲೆ ಬೇಕಾದ ಸಿನಿಮವೆಂದರೆ ಅದು ನಾನಿ. ದಯವಿಟ್ಟು ಈ ಅವಕಾಶ ವಂಚಿತರಾಗಬೇಡಿ